ಮಂಗಳವಾರ, ಫೆಬ್ರವರಿ 2, 2010

ಪ್ರಕೃತಿ.....




ಕಾಣುವ ಮರೀಚಿಕೆ ಅವಳು
ಅವಳ ಬಗ್ಗೆ ನನಗೆ ಬಹಳ ಪ್ರೀತಿ.
ನಾನು ಯಾರು? ಯಾವ ಊರು?
ನನ್ನ ಗತಿ ಗುರಿಗಳೇನೆಂದು?
ಅವಳಿಗೆ ತಿಳಿಸುವ ಹಂಬಲ ನನಗೆ.
ಅದು ಅವಳಿಗೆ, ಬೇಕೋ ಬೇಡವೋ
ನನಗಂತೂ ತಿಳಿದಿಲ್ಲ.
ನನಗೂ ಅವಳೂ ಯಾರೂ? ಯಾವ ಊರು?
ಅವಳ ಗತಿ ಗುರಿಗಳೇನೆಂದು?
ತಿಳಿಯುವ ಅಗತ್ಯವಿಲ್ಲ..!


ಆದರೂ ಇವಳೆ ನನ್ನ ಕನಸಿನ ಸ್ಪೂರ್ತಿ
ಮನಸಿನ ಕೀರ್ತಿ, ಉಸಿರಿನ ಆರತಿ.

ಅವಳ ಮೊಗದ ಬಾನಲ್ಲಿ ...
ಕಣ್ಣೋಟದ ಮಿಂಚು ಹರಿದು...
ತುಂಟುಯಂಚಲಿ ನಗು ಮೊಡ ಬಿರಿದು..
ಸುರಿದ ಮುತ್ತಿನ ಸೋನೆಗೆ.
ನನ್ನ ಬತ್ತಿದೆದೆಯ ಇಳೆಯಲ್ಲಿ...
ಭಿತ್ತಿದ್ದ ಕನಸಿನ ಬೀಜಗಳು ಮೊಳಕೆ ಒಡೆದವು.
ಅವಳ ಸೌಂದರ್ಯದ ಹೊಂಗಿರಣಗಳ ಸ್ಪರ್ಶಕ್ಕೆ
ನನ್ನ ಕನಸುಗಳು ಹಸಿರಾಗಿ ಬೆಳೆಯುತ್ತಿವೆ.

ಅವಳ ಕೇಶ ರಾಶಿಯೇ ನನ್ನ ಕನಸಿಗೆ ಸ್ಪೂರ್ತಿ
ಮಲ್ಲೆಬಿಲ್ಲಂತ ಕಣ್ಣುಬ್ಬುಗಳೇ ಮನಸಿನ ಕೀರ್ತಿ
ಈ ಸುಂದರಿಯೇ ನನ್ನ ಉಸಿರು
ಅರಾಧಿಸುವ ಆರತಿ.....ನನ್ನ ಪ್ರೀತಿಯ ಪ್ರಕೃತಿ.

(ಪ್ರಕೃತಿ ಮಾತೆಯನ್ನು ....ಒಬ್ಬ ಹೆಣ್ಣು ಮಗಳಿಗೆ ಹೋಲಿಸಲು ಯತ್ನಿಸಿದ ಸಣ್ಣ ಪ್ರಯತ್ನ).....ಪ್ರವೀಣ.