ಮಂಗಳವಾರ, ಫೆಬ್ರವರಿ 2, 2010

ಪ್ರಕೃತಿ.....




ಕಾಣುವ ಮರೀಚಿಕೆ ಅವಳು
ಅವಳ ಬಗ್ಗೆ ನನಗೆ ಬಹಳ ಪ್ರೀತಿ.
ನಾನು ಯಾರು? ಯಾವ ಊರು?
ನನ್ನ ಗತಿ ಗುರಿಗಳೇನೆಂದು?
ಅವಳಿಗೆ ತಿಳಿಸುವ ಹಂಬಲ ನನಗೆ.
ಅದು ಅವಳಿಗೆ, ಬೇಕೋ ಬೇಡವೋ
ನನಗಂತೂ ತಿಳಿದಿಲ್ಲ.
ನನಗೂ ಅವಳೂ ಯಾರೂ? ಯಾವ ಊರು?
ಅವಳ ಗತಿ ಗುರಿಗಳೇನೆಂದು?
ತಿಳಿಯುವ ಅಗತ್ಯವಿಲ್ಲ..!


ಆದರೂ ಇವಳೆ ನನ್ನ ಕನಸಿನ ಸ್ಪೂರ್ತಿ
ಮನಸಿನ ಕೀರ್ತಿ, ಉಸಿರಿನ ಆರತಿ.

ಅವಳ ಮೊಗದ ಬಾನಲ್ಲಿ ...
ಕಣ್ಣೋಟದ ಮಿಂಚು ಹರಿದು...
ತುಂಟುಯಂಚಲಿ ನಗು ಮೊಡ ಬಿರಿದು..
ಸುರಿದ ಮುತ್ತಿನ ಸೋನೆಗೆ.
ನನ್ನ ಬತ್ತಿದೆದೆಯ ಇಳೆಯಲ್ಲಿ...
ಭಿತ್ತಿದ್ದ ಕನಸಿನ ಬೀಜಗಳು ಮೊಳಕೆ ಒಡೆದವು.
ಅವಳ ಸೌಂದರ್ಯದ ಹೊಂಗಿರಣಗಳ ಸ್ಪರ್ಶಕ್ಕೆ
ನನ್ನ ಕನಸುಗಳು ಹಸಿರಾಗಿ ಬೆಳೆಯುತ್ತಿವೆ.

ಅವಳ ಕೇಶ ರಾಶಿಯೇ ನನ್ನ ಕನಸಿಗೆ ಸ್ಪೂರ್ತಿ
ಮಲ್ಲೆಬಿಲ್ಲಂತ ಕಣ್ಣುಬ್ಬುಗಳೇ ಮನಸಿನ ಕೀರ್ತಿ
ಈ ಸುಂದರಿಯೇ ನನ್ನ ಉಸಿರು
ಅರಾಧಿಸುವ ಆರತಿ.....ನನ್ನ ಪ್ರೀತಿಯ ಪ್ರಕೃತಿ.

(ಪ್ರಕೃತಿ ಮಾತೆಯನ್ನು ....ಒಬ್ಬ ಹೆಣ್ಣು ಮಗಳಿಗೆ ಹೋಲಿಸಲು ಯತ್ನಿಸಿದ ಸಣ್ಣ ಪ್ರಯತ್ನ).....ಪ್ರವೀಣ.

ಭಾನುವಾರ, ಜನವರಿ 17, 2010

ವಿಜಯದ ನೆನಪು....


ನನ್ನ ವಿಜಯ ಕಾಲೇಜಿನ ಹಿರಿಯ ಹಾಗೂ ಕಿರಿಯ ಗೆಳೆಯ ಮತ್ತು ಗೆಳತಿಯರಿಗಾಗಿ ....



ನಾನು ಯಾರೋ ನೀವು ಯಾರೋ

ಯಾವ ತೋಟದ ಹೂವುಗಳೋ

ಎಲ್ಲೆಲ್ಲಿ ಬೆಳೆದೆವೋ ....

ಸೇರಿದೆವು ಅಲ್ಲಿ .... ವಿಜಯದ ಮಾಡಿಲ್ಲಲ್ಲಿ

ಗುರುಗಳ ಕಾಂತಿಗೆ ಅರಳಿದೆವು

ಜ್ಞಾನದ ಕಂಪು ಸೂಸುತ್ತಾ ....

ಪ್ರತಿಭೆಯ ಪರಿಮಳ...ಚೆಲ್ಲುತ್ತಾ...

ನಿಂತಿದ್ದೇವೆ, ಪ್ರಜ್ವಲಿಸುವ ಪುಷ್ಪಗಳಾಗಿ .


ಮರೆಯದಿರಿ ನೀವು ನನ್ನನು ...

ನಾನು ನಿಮ್ಮ ಗೆಳೆಯ .

ಮರೆಯನು ನಾನು ನಿಮ್ಮನ್ನು ...

ನೀವು ನನ್ನ ಸ್ಪೂರ್ತಿದಾಯಕರು.

ನೆನಪಾಗದಿರಲಿ ಕಹಿನೆನಪೆಂದು ...

ಮರೆತು ಹೋಗದಿರಲಿ ಸಿಹಿನೆನಪೆಂದು .


ನೀವು ನೀವು ನಿಂತಿದ್ದೀರಿಂದು ನಿಮ್ಮ ಕನಸಿನ ನಿಲ್ದಾಣದಲ್ಲಿ

ನಾನು ಹಾರೈಸುವೆ ನಿಮ್ಮ ಕನಸಿನ ಪಯಣ

ನನಸಾಗಲೆಂದು .

ನಿಮ್ಮ ಬದುಕು ಹಸಿರಾಗಿರಲಿ .....

ಹಸಿರು ಉಸಿರಾಗಿರಲಿ ....

ಹೆಸರು ಇತಿಹಾಸ ಸೇರಲಿ .



ಶುಕ್ರವಾರ, ಜನವರಿ 15, 2010

ಕ್ಷಮಿಸು ಗೆಳತಿ.....


ಮುಗ್ದ ಮನಸ್ಸಿನ ಮೌನ ಭಾವಕೆ
ಮಾತಿನ ಮುಳ್ಳು ಚುಚ್ಚಿ ...
ನೋಯಿಸಿದ ಪಾಪಿ ನಾನು..!
ಗೆಳೆಯನ ಮನದ ಗಾಯಕ್ಕೆ ಮುಲಾಮು ಅಚ್ಚಿ ಸಂತೈಸಿದ ಪುಣ್ಯವಂತೆ ನೀನು.
ನೋವುಗಳ ನುಂಗಿ...
ನಲಿವುಗಳ ಹಂಚುವ ಗೆಳತಿ...
ನಿನಗೆ ನೀನೆ ಸಾಟಿ ...

ಸ್ನೇಹವೇ ದೇವರು ನಿಜವಂತೆ ...
ನಿಜವೇ ಮಮತೆ ಬಂಧಗಳ ತಳಹದಿಯಂತೆ .
ಮಗುವಿನ ನಿರ್ಮಲ ಹೃದಯದ ಮಮತೆ
ಭಾತೃತ್ವ ಭಾವನೆಗಳ ದಿವ್ಯ ಬಂಧವೇ ನಿನ್ನ ಸ್ನೇಹ .
ನಿನ್ನ ಸ್ನೇಹ ಸಂಪಾದಿಸಿದ ನಾನೇ ಸಿರಿವಂತ
ಅದನ್ನುಳಿಸಿಕೊಂಡರೆ ನಾನೇ ಭಾಗ್ಯವಂತ .
ಒಮ್ಮೆ ಕ್ಷಮಿಸು ಗೆಳತಿ ನಿನ್ನ ಮನದ ಅಂತರಾಳದಿಂದ
ಮತ್ತೊಮ್ಮೆ ಜೀವನದಲ್ಲಿ.... ಹೀಗಾಗದಂತೆ ಜಾಗೃಥನಾಗುವೆ .....